9 January 2015

ಕವಿ ಕಯ್ಯಾರರ ಕಣ್ಣುಗಳು ಬೆಳಗಲಿ _ ಶ್ರೀ ಯತೀಶ್ ಕುಮಾರ್ ರೈ

 ಕವಿ ಕಯ್ಯಾರರ ಕಣ್ಣುಗಳು ಬೆಳಗಲಿ
             _ ಶ್ರೀ ಯತೀಶ್ ಕುಮಾರ್ ರೈ

ಬದಿಯಡ್ಕ : ಶತಾಯುಷಿ ಕವಿ ಶ್ರೀ ಕಯ್ಯಾರರು ಬದಿಯಡ್ಕ ಪಂಚಾಯತು ಅಧ್ಯಕ್ಷರಾಗಿದ್ದಾಗ ಸ್ಥಾಪಿಸಿದ ಎರಡು ಶಾಲೆಗಳು ಅವರ ಕಣ್ಣುಗಳು ಇದ್ದ ಹಾಗೆ. ಆ ಶಾಲೆಗಳ ಮಕ್ಕಳ ಸಂಖ್ಯೆ ಹಾಗೂ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿ ಬೆಳಗಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎ೦ದು ಸರ್ವಶಿಕ್ಷಾ ಅಭಿಯಾನದ ಜಿಲ್ಲಾ ಪ್ರೋಗ್ರಾಂ ಓಫಿಸರ್  ಶ್ರೀ ಯತೀಶ್ ಕುಮಾರ್ ರೈ ಅಭಿಪ್ರಾಯಪಟ್ಟರು.  ಅವರು ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ ಶಾಲಾಭಿವೃದ್ಧಿ ಸೆಮಿನಾರ್ ಮತ್ತು ಫೋಕಸ್ 2015ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯವರಾಗಿ ಮಾತನಾಡುತ್ತಿದ್ದರು.
            ಕಾರ್ಯಕ್ರಮವನ್ನು ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಸಿ.ಎಚ್  ಅವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಶಾರದ ಉದ್ಘಾಟಿಸಿದರು. ಕುಂಬಳೆ ಬಿ.ಆರ್.ಸಿಯ ಬಿ.ಪಿ.ಒ  ಶ್ರೀ ರಾಧಾಕೃಷ್ಣರವರು ಪ್ರಾಸ್ತಾವಿಕ ನುಡಿಯನ್ನಾಡಿದರು. ತರಬೇತುದಾರರಾದ  ಶ್ರೀ  ಯೂಸಫ್, ಶ್ರೀಮತಿ ಕಾರ್ಮಿಳಿ, ನವಜೀವನ ಹೈಸ್ಕೂಲ್  ಪಿ.ಟಿ.ಎ ಅಧ್ಯಕ್ಷರಾದ
 ಶ್ರೀ  ಜಗನ್ನಾಥ ಆಳ್ವ ,ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಚ್ಯುತ ಮಣಿಯಾಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾಧ್ಯಾಪಕ  ಶ್ರೀ ರಾಜೇಶ್ ಪ್ರಬಂಧ ಮಂಡಿಸಿದರು.
              ಕಾರ್ಯಕ್ರಮದಲ್ಲಿ  ಎ೦.ಪಿ.ಟಿ.ಎ ಅಧ್ಯಕ್ಷೆ  ಶ್ರೀಮತಿ ವಿಜಯಕುಮಾರಿ, ವಿದ್ಯಾಗಿರಿ  ಶಾಲಾಧ್ಯಾಪಿಕೆ ಶ್ರೀಮತಿ ಅಂಬಿಕಾ ಸರಸ್ವತಿ,ಕ್ಲಬ್  ಅಧ್ಯಕ್ಷರಾದ  ಶ್ರೀ ರವಿ ಕೈಲಂಕಜೆ, ಶಾಲಾ ಹಿತೈಷಿಗಳಾದ  ಶ್ರೀ ಪುರುಷೋತ್ತಮ ಭಟ್, ಶ್ರೀ ಗೋವಿಂದ ಭಟ್, ಶ್ರೀ ಕೇಸರಿ ಕಡಾರ್, ಶ್ರೀಮತಿ ರೇವತಿ ಮೊದಲಾದವರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮಿ ಸ್ವಾಗತಿಸಿ ಕೊನೆಯಲ್ಲಿ ಶಾಲಾಧ್ಯಾಪಿಕೆ ಶ್ರೀಮತಿ ಸವಿತ.ಸಿ.ಎಚ್ ಧನ್ಯವಾದವಿತ್ತರು. ನ೦ತರ ಶಾಲಾಭಿವ್ರ್ ದ್ಧಿ  ಸಮಿತಿ ರೂಪಿಸಲಾಯಿತು

X'MAS CELEBRATION WITH HBE STUDENT - PAPER NEWS